ಈಗ ಪ್ರತಿಯೊಬ್ಬ ಭಾರತೀಯರು ಪ್ರಯಾಗರಾಜ್ ದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿ ಅಲ್ಲಿನ ತ್ರಿವೇಣಿ ಸಂಗಮದಲ್ಲಿ ಮಿಂದು ಪಾವನರಾಗುವ ಕನಸು ಕಾಣಸುತ್ತಾರೆ.ಅದರಲ್ಲೂ 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಲು ಎಲ್ಲರ ಹಾತೊರೆಯುತ್ತಾರೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ರಿಲಯನ್ಸ್ ನ ಮುಖ್ಯಸ್ಥ ಮುಖೇಶ್ ಅಂಬಾನಿ ಕೂಡ ಕುಂಭ ಮೇಳದಲ್ಲಿ ಪಾಲ್ಗೊಂಡಿರುದು ಅಚ್ಚರಿಯ ಸಂಗತಿ ಏನಲ್ಲ, ಆದರೆ ಅವರ ಭಾಗವಹಿಸುವೆ ವಿಶೇಷವಾಗಿರುವುದೆಕೆಂದರೆ ಅವರು ಅಲ್ಲಿ ತಮ್ಮ ಅಂಗಡಿಯೊಂದು ಓಪನ್ ಮಾಡಿ ಮೇಳ ಕ್ಕೆ ಬಂದಿರುವ ಭಕ್ತರಿಗೆ ಜಿಯೋ ಸೀಮ್ ಗಳನ್ನು ಮಾರಾಟ ಮಾಡುತ್ತಿದ್ದಾರೆ.
AI is Getting Out Of Control 😂😂 Famous Personalities Ambani, Adani, Elon Musk.. at Kumbh Mela at their Shops 😂 pic.twitter.com/AKTzx25MGA
— Rosy (@rose_k01) February 20, 2025
ಎಕ್ಷ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ಇದನ್ನು ನೋಡಿದ ಬಹುತೇಕರು ಅಯ್ಯೋ..! ಇದೇನಿದು ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಅಂಬಾನಿ ಸಿಮ್ ಮಾರುವ ಕೆಲಸಕ್ಕೆ ಮುಂದಾಗುವುದೇ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ರೋಸಿ ಎನ್ನುವವರು ತಮ್ಮ ಎಕ್ಸ್ ವೇದಿಕೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ ಅಷ್ಟಕ್ಕೂ ಇದು ನಕಲಿ ವಿಡಿಯೋವಾಗಿದೆ, ಕೃತಕಬುದ್ದಿಮತ್ತೆ ಯನ್ನು ಬಳಸಿ ನಿರ್ಮಿಸಿರುವ ವಿಡಿಯೋ ಇದಾಗಿದ್ದು"ಎಐ ಈಗ ಔಟ್ ಆಫ್ ಕಂಟ್ರೋಲ್ ಆಗಿದೆಪ್ರಸಿದ್ದ ವ್ಯಕ್ತಿಗಳಾದ ಅಂಬಾನಿ,ಅದಾನಿ,ಎಲೋನ್ ಮಾಸ್ಕ್ ಅವರು ಕುಂಭಮೇಳದಲ್ಲಿ ಅಂಗಡಿಯನ್ನು ತೆರೆದಿದ್ದಾರೆ" ಎಂದು ಅವರು ಬರೆದುಕೊಂಡಿದ್ದಾರೆ.
ಏನೇ ಆಗಲಿ ಈಗ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನವು ನೈಜ್ಯತೆಯನ್ನು ನಾಚಿಸುವ ಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಅಚ್ಚರಿ ಎಂದೇ ಹೇಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.