Priyanka chopra on virginity : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕನ್ಯತ್ವ ಬಗ್ಗೆ ನೀಡಿರುವ ಹೇಳಿಕೆಗಳು ಈಗ ವಿವಾದಕ್ಕೆ ಕಾರಣವಾಗಿವೆ. ಪಿಂಕಿ ಓರ್ವ ಮಹಿಳೆಯಾಗಿದ್ದರೂ ಸಹ, ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಅಂತ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ಅಸಲಿಗೆ ನಟಿ ಹೇಳಿದ್ದೇನು..? ಬನ್ನಿ ನೋಡೋಣ..
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪ್ರಸ್ತುತ ರಾಜಮೌಳಿ ನಿರ್ದೇಶನದ SSMB 29 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ನಾಯಕನಾಗಿ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರನ್ನು ಈಗಾಗಲೇ ಘೋಷಿಸಲಾಗಿದೆ ಎಂದು ತಿಳಿದಿದೆ.
ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಹೈದರಾಬಾದ್‌ಗೆ ಬಂದರು. ಜೊತೆಗೆ, ಚಿಲುಕೂರು ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದೇ ರೀತಿ, ದೋಮಕೊಂಡ ಶಿವ ದೇವಾಲಯಕ್ಕೂ ಹೋಗಿ ದರ್ಶನ ಪಡೆದರು.
ನಟಿ ಎಸ್‌ಎಸ್‌ಎಂಬಿ 29 ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆಯೇ ಅಥವಾ ಬೇರೆ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಷಯವನ್ನು ಚಿತ್ರತಂಡ ಇನ್ನೂ ಸ್ಪಷ್ಟಪಡಿಸಿಲ್ಲ.
ಹೈದರಾಬಾದ್‌ನಲ್ಲಿ ಈ ಚಿತ್ರದ ದೃಶ್ಯಗಳನ್ನು ಪೂರ್ಣಗೊಳಿಸಿದ ನಂತರ ಚಿತ್ರತಂಡ ವಿದೇಶಕ್ಕೆ ತೆರೆಳಲಿದೆ ಎಂದು ವರದಿಯಾಗಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಟ್ರಾವೆಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಟ್ವೀಟ್ ಮಾಡಿದ್ದು, ಅನೇಕ ಜನರು ತಮ್ಮ ಭಾವಿ ಪತ್ನಿಯರು ಕನ್ಯೆಯರಾಗಬೇಕೆಂದು ಬಯಸುತ್ತಾರೆ, ಆದರೆ ಕನ್ಯೆಯಾಗಿರುವುದು ಅಷ್ಟು ಮುಖ್ಯವಲ್ಲ. ನಿಮ್ಮನ್ನು ಅರ್ಥಮಾಡಿಕೊಳ್ಳುವ ಮತ್ತು ನೀವು ಬಯಸಿದಂತೆ ಇರುವ ಮಹಿಳೆಯನ್ನು ನೋಡಿಕೊಳ್ಳಿ ಅಂತ ಸಲಹೆ ನೀಡಿದ್ದಾರೆ.
ಅಷ್ಟೇ ಅಲ್ಲ, ಕನ್ಯತ್ವ ರಾತ್ರೋರಾತ್ರಿ ಕಳೆದುಕೊಳ್ಳಬಹುದು.. ಅದರ ಬಗ್ಗೆ ಹೆಚ್ಚು ಚಿಂತಿಸಬಾರದು ಎಂದು ಪಿಂಕಿ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.. ಇದರೊಂದಿಗೆ, ಈ ವಿವಾದ ಈಗ ಉತ್ತುಂಗಕ್ಕೇರಿದೆ. ಪ್ರಿಯಾಂಕಾ ಚೋಪ್ರಾ ಅವರ ಈ ಹೇಳಿಕೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ.. ಕೆಲವರು ಪ್ರಿಯಾಂಕಾ ಚೋಪ್ರಾ ಹಳೆ ಮ್ಯಾಟರ್ ತೆಗೆಯುತ್ತಿದ್ದಾರೆ.. ಈ ಹಿಂದೆ ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಜೊತೆ ಪಿಂಕಿ ಡೇಟಿಂಗ್ ಮಾಡಿದ್ದರು ಎಂದು ಟಾಂಗ್ ನೀಡುತ್ತಿದ್ದಾರೆ...
ಇನ್ನು ಕೆಲವರು ಪ್ರಿಯಾಂಕ ಕನ್ಯತ್ವದ ಬಗ್ಗೆ ಮಾತನಾಡುವುದು ವಿಚಿತ್ರ ಎಂದು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ, ಪ್ರಿಯಾಂಕಾ ಚೋಪ್ರಾ ಮಹಿಳೆಯರ ಬಗ್ಗೆ ಮಾಡಿರುವ ಹೇಳಿಕೆಗಳು ದೊಡ್ಡ ವಿವಾದ ಸೃಷ್ಟಿಸಿವೆ. ಮಹಿಳೆಯಾಗಿದ್ದು.. ಇಂತಹ ಕಾಮೆಂಟ್‌ಗಳನ್ನು ಮಾಡುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.