ಈ ಮದುವೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ ಬಾಲಿವುಡ್‌ನಲ್ಲಿ ಕೂಡ ಚರ್ಚೆಯಾಗುತ್ತಿದೆ. ಮಗಳ ವಯಸ್ಸಿನವಳ ಜೊತೆ ಸಾಹಿಲ್ ಖಾನ್ ಮದುವೆಯಾಗಿದ್ದು ಸರಿಯಲ್ಲ. ಆದಷ್ಟು ಬೇಗ ವಿಚ್ಛೇದನದ ಮೂಲಕ ಇಬ್ಬರು ದೂರವಾಗುತ್ತಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
Sahil Khan Married Again: ಪ್ರೀತಿಗೆ ಯಾವುದೇ ಬಣ್ಣ, ಭಾಷೆ, ಜಾತಿ-ಮತಗಳ ಹಂಗಿಲ್ಲ. ವಯಸ್ಸಿನ ಮಿತಿಯಿಲ್ಲ. ಅದು ಯಾರಿಗೆ? ಯಾವಾಗ? ಯಾವ ಕಾರಣಕ್ಕೆ? ಹುಟ್ಟುತ್ತದೆ ಎಂಬುದು ಯಾರಿಗೂ ಗೊತ್ತಾಗೋದಿಲ್ಲ. ಇದಕ್ಕೆ ಸಾಹಿಲ್ ಖಾನ್ ಮತ್ತು ಮಿಲೆನಾ ಅಲೆಕ್ಸಾಂಡ್ರಾ ಜೋಡಿಯೂ ಸಹ ಹೊರತಾಗಿಲ್ಲ. ಈ ಜೋಡಿ ಮದುವೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಜೋಡಿಯ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹೌದು, ಸಾಹಿಲ್ ಖಾನ್ ಯಾರಿಗೆ ಗೊತ್ತಿಲ್ಲ ಹೇಳಿ... ಇವರು ಮಾಜಿ ಫೆಮಸ್ ಬಾಲಿವುಡ್ ಸ್ಟಾರ್. 'ಸ್ಟೈಲ್' ಮತ್ತು 'ಎಕ್ಸ್ ಕ್ಯೂಸ್ ಮಿ' ಚಿತ್ರಗಳಿಂದ ಇವರು ಸಿನಿರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದವರು. ಇವರಿಗೆ ಈಗ 48 ವರ್ಷ.
ತಮ್ಮ ಆಕರ್ಷಕ ನಟನೆಯಿಂದ ಎಲ್ಲರ ನೆಚ್ಚಿನ ಸ್ಟಾರ್ ಆಗಿದ್ದ ಸಾಹಿಲ್ ಖಾನ್ ತನಗಿಂತಲೂ 26 ವರ್ಷ ಚಿಕ್ಕವಳಾದ 22 ವರ್ಷದ ಯುರೋಪ್‌ನ ಬೆಲಾರಸ್ ಮೂಲದ ಮಿಲೆನಾ ಅಲೆಕ್ಸಾಂಡ್ರಾರನ್ನ ಪ್ರೀತಿಸಿ ನಂತರ ನಿಶ್ಚಿತಾರ್ಥವನ್ನು ಮಾಡಿಕೊಂಡ್ಡಿದ್ದರು. ಅಷ್ಟೆ ಅಲ್ಲದೆ ತಮ್ಮ ಪ್ರೀತಿಯ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಹಂಚಿಕೊಂಡಿದ್ದರು.
ಇದೇ ಸಾಹಿಲ್ ಖಾನ್ ಈಗ ಮಿಲೆನಾ ಜೊತೆ ದುಬೈನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಸಂಪ್ರದಾಯಗಳಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೊ ಮತ್ತು ವಿಡಿಯೋಗಳನ್ನು ಸಹ ಹಂಚಿಕೊಂಡಿದ್ಧಾರೆ.
ಈ ಮದುವೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ ಬಾಲಿವುಡ್‌ನಲ್ಲಿ ಕೂಡ ಚರ್ಚೆಯಾಗುತ್ತಿದೆ. ಮಗಳ ವಯಸ್ಸಿನವಳ ಜೊತೆ ಸಾಹಿಲ್ ಖಾನ್ ಮದುವೆಯಾಗಿದ್ದು ಸರಿಯಲ್ಲ. ಆದಷ್ಟು ಬೇಗ ವಿಚ್ಛೇದನದ ಮೂಲಕ ಇಬ್ಬರು ದೂರವಾಗುತ್ತಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಸಾಹಿಲ್ ಅವರ ಈ ನಡೆ ಹಿಂದೆ ಸಹ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಗುರಿಯಾಗಿತ್ತು. ಈಗ ಮಿಲೆನಾ ಇಸ್ಲಾಂ ಧರ್ಮಕ್ಕೆ ಮಂತಾತರಗೊಂಡು ಒಂದು ತಿಂಗಳ ನಂತರ ಸಾಹಿಲ್‌ರನ್ನ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮಿಕ್ಕಂತೆ ಸಾಹಿಲ್ ಬಗ್ಗೆ ಹೇಳಬೇಕೆಂದರೆ 2001ರಲ್ಲಿ 'ಸ್ಟೈಲ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಲಗ್ಗೆ ಇಟ್ಟಿದ್ದರು. ಆ ನಂತರ ಬಂದ ʼಎಕ್ಸ್‌ಕ್ಯೂಸ್ ಮೀʼ ಚಿತ್ರವು ಇವರಿಗೆ ಸಿಕ್ಕಾಪಟ್ಟೆ ಹೆಸರು ತಂದುಕೊಟ್ಟಿತ್ತು.
ಆ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಸಾಹಿಲ್ ಖಾನ್ 2003ರಲ್ಲಿ ನಿಗಾರ್ ಖಾನ್‌ರನ್ನು ವಿವಾಹವಾಗಿ 2005ರಲ್ಲಿ ವಿಚ್ಛೇದನವನ್ನೂ ಪಡೆದಿದ್ದರು. ಇನ್ನು ಕಳೆದ ವರ್ಷ ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ 15,000 ಕೋಟಿ ರೂ. ವಂಚನೆ ಆರೋಪದಡಿ ಸಾಹಿಲ್‌ನನ್ನ ಪೊಲೀಸರು ಬಂಧಿಸಿದ್ದರು.