ಶಾಲೆಗೆ ಹೋಗುವಾಗ ಹೃದಯಾಘಾತದಿಂದ 10ನೇ ತರಗತಿಯ ವಿದ್ಯಾರ್ಥಿನಿ ಸಾವು, ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷಿಸಿಕೊಳ್ಳಿ..!

ಇದೆ ವೇಳೆ ಆಕೆ ಇದಕ್ಕೆ ಸ್ಪಂಧಿಸದಿದ್ದಾಗ ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಲ್ಲಿ ವೈದ್ಯರು ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಅವರು ಖಚಿತಪಡಿಸಿದ್ದಾರೆ.

Written by - Manjunath N | Last Updated : Feb 22, 2025, 10:42 AM IST
  • ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಅವರನ್ನು ಪರೀಕ್ಷಿಸಿ ಸಿಪಿಆರ್ ಸೇರಿದಂತೆ ಆರಂಭಿಕ ಚಿಕಿತ್ಸೆ ನೀಡಿದ್ದಾರೆ.
  • ಇದೆ ವೇಳೆ ಆಕೆ ಇದಕ್ಕೆ ಸ್ಪಂಧಿಸದಿದ್ದಾಗ ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
  • ಅಲ್ಲಿ ವೈದ್ಯರು ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಅವರು ಖಚಿತಪಡಿಸಿದ್ದಾರೆ.
 ಶಾಲೆಗೆ ಹೋಗುವಾಗ ಹೃದಯಾಘಾತದಿಂದ 10ನೇ ತರಗತಿಯ ವಿದ್ಯಾರ್ಥಿನಿ ಸಾವು, ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷಿಸಿಕೊಳ್ಳಿ..! title=

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಫೆಬ್ರವರಿ 20 ರ ಬೆಳಿಗ್ಗೆ 10 ನೇ ತರಗತಿಯ ವಿದ್ಯಾರ್ಥಿನಿ ಶಾಲೆಗೆ ಹೋಗುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.ಈ ವಿದ್ಯಾರ್ಥಿನಿಯನ್ನು ಶ್ರೀ ನಿಧಿ ಎಂದು ಗುರುತಿಸಲಾಗಿದ್ದು, ರಾಮರೆಡ್ಡಿ ಮಂಡಲದ ಸಿಂಗರಾಯಪಲ್ಲಿ ಗ್ರಾಮದ ನಿವಾಸಿಯಾಗಿರುವ ಆಕೆ ಖಾಸಗಿ ಶಾಲೆಯಲ್ಲಿ ಓದಲು ಕಾಮರೆಡ್ಡಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.ಶಾಲೆಗೇ ಹೋಗುತ್ತಿರುವಾಗ ಆಕೆಗೆ ಧಿಡೀರ್ ರನೇ ಎದೆ ನೋವು ಕಾಣಿಸಿಕೊಂಡು ಶಾಲೆಯ ಬಳಿ ಕುಸಿದು ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಕಟ್ಟಡ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ!

ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಅವರನ್ನು ಪರೀಕ್ಷಿಸಿ ಸಿಪಿಆರ್ ಸೇರಿದಂತೆ ಆರಂಭಿಕ ಚಿಕಿತ್ಸೆ ನೀಡಿದ್ದಾರೆ.ಇದೆ ವೇಳೆ ಆಕೆ ಇದಕ್ಕೆ ಸ್ಪಂಧಿಸದಿದ್ದಾಗ ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಲ್ಲಿ ವೈದ್ಯರು ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಅವರು ಖಚಿತಪಡಿಸಿದ್ದಾರೆ.ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶ್ರೀ ನಿಧಿಯಂತಹ ಚಿಕ್ಕ ಹುಡುಗಿ ಹೃದಯಾಘಾತದಿಂದ ಸಾವನ್ನಪ್ಪಿರುವುದನ್ನು ತಿಳಿದು ಆಘಾತಕ್ಕೊಳಗಾಗಿದ್ದಾರೆ.

ಅಲಿಗಢದ ಸಿರೌಲಿ ಗ್ರಾಮದ 6 ನೇ ತರಗತಿ ವಿದ್ಯಾರ್ಥಿ ಮೋಹಿತ್ ಚೌಧರಿ ಹೃದಯಾಘಾತದಿಂದ ಸಾವನ್ನಪ್ಪಿದ ಕೆಲವು ತಿಂಗಳ ನಂತರ ಶ್ರೀ ನಿಧಿಯವರ ಸಾವು ಸಂಭವಿಸಿದೆ. 14 ವರ್ಷದ ಬಾಲಕ ವಾರ್ಷಿಕ ಕ್ರೀಡಾ ದಿನದ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾಗ ಅಭ್ಯಾಸ ಓಟದ ಸಮಯದಲ್ಲಿ ಬಿದ್ದು ಗಾಯಗೊಂಡನು. ಅದೇ ಜಿಲ್ಲೆಯ ಮತ್ತೊಬ್ಬ ಬಾಲಕಿ, 8 ವರ್ಷದ ದೀಕ್ಷಾ, ಕೆಲವು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಳು.

ಇದನ್ನೂ ಓದಿ: ಭಾಷೆಗಳ ಕುರಿತು ಖ್ಯಾತ ಗಾಯಕಿಯ ಸೆನ್ಶೇಷ್ನಲ್ ಹೇಳಿಕೆ..! ಹೀಗೆ ಹೇಳಿದ್ದು ಸರಿನಾ..।

ಹೃದಯ ಸ್ತಂಭನದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಂ. ರಬ್ಬಾನಿ ಹೇಳಿದ್ದರು ಮತ್ತು ಹೃದಯ ಸ್ತಂಭನದಿಂದ ಉಂಟಾಗುವ ಸಾವುಗಳ ಬಗ್ಗೆ ಅವರು ಪ್ರಮುಖ ಮಾಹಿತಿಯನ್ನು ನೀಡಿದ್ದಾರೆ. "ಆರೋಗ್ಯವಂತ ವ್ಯಕ್ತಿ ಒಂದು ಗಂಟೆಯೊಳಗೆ ಸತ್ತರೆ ಅದನ್ನು ಹಠಾತ್ ಹೃದಯ ಸ್ತಂಭನ ಎಂದು ಕರೆಯಲಾಗುತ್ತದೆ. ಕಳೆದ 2 ವರ್ಷಗಳಲ್ಲಿ ಇದರಲ್ಲಿ ಶೇಕಡಾ 22 ರಷ್ಟು ಹೆಚ್ಚಳವಾಗಿದೆ. ಮಗುವಿಗೆ ಉಸಿರಾಟದ ತೊಂದರೆ ಮತ್ತು ಎದೆನೋವು ಬಂದರೆ, ತಕ್ಷಣ ಅವರನ್ನು ಪರೀಕ್ಷಿಸಬೇಕು" ಎಂದು ಅವರು ಹೇಳಿದರು. 

ಮಕ್ಕಳಲ್ಲಿ ಹೃದಯ ಕಾಯಿಲೆಯ ಲಕ್ಷಣಗಳು:

ಇತ್ತೀಚಿನ ದಿನಗಳಲ್ಲಿ, ಶಾಲೆಗೆ ಹೋಗುವ ಸಣ್ಣ ಮಕ್ಕಳು ಅಥವಾ ಹದಿಹರೆಯದವರು ಸಹ ಹೃದಯಾಘಾತದ ಅಪಾಯದಲ್ಲಿದ್ದಾರೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಅನಾರೋಗ್ಯಕರ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದ ಉಂಟಾಗಬಹುದು. ಈ ರೋಗಗಳ ಲಕ್ಷಣಗಳು ಸಾಮಾನ್ಯವಾಗಿ ಕ್ರಮೇಣ ಕಾಣಿಸಿಕೊಳ್ಳುತ್ತವೆ, ಹಾಗಾಗಿ ಸಮಯಕ್ಕೆ ಸರಿಯಾಗಿ ಗುರುತಿಸುವುದು ಮುಖ್ಯ. ಮಕ್ಕಳ ದೇಹದಲ್ಲಿ ಕೆಲವು ವಿಚಿತ್ರ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, 

1. ಬೇಗನೆ ದಣಿದ ಅನುಭವ: ಕ್ರೀಡೆ ಅಥವಾ ಸಾಮಾನ್ಯ ದೈಹಿಕ ಚಟುವಟಿಕೆಗಳ ಸಮಯದಲ್ಲಿ ಮಗು ಬೇಗನೆ ದಣಿಯುತ್ತದೆ.
2. ಉಸಿರಾಟದ ತೊಂದರೆ: ಮಗುವಿಗೆ ಸ್ವಲ್ಪ ದೈಹಿಕ ಚಟುವಟಿಕೆಯ ನಂತರವೂ ಉಸಿರಾಟದ ತೊಂದರೆ ಉಂಟಾಗಲು ಪ್ರಾರಂಭಿಸುತ್ತದೆ.
3. ತುಟಿಗಳು, ಉಗುರುಗಳು ಅಥವಾ ಚರ್ಮ ನೀಲಿ ಬಣ್ಣಕ್ಕೆ ತಿರುಗುವುದು (ಸೈನೋಸಿಸ್): ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ, ಚರ್ಮವು ನೀಲಿ ಬಣ್ಣಕ್ಕೆ ತಿರುಗಬಹುದು.
4. ಎದೆ ನೋವು ಅಥವಾ ಭಾರ: ಕೆಲವು ಮಕ್ಕಳು ದೈಹಿಕ ಚಟುವಟಿಕೆಗಳ ಸಮಯದಲ್ಲಿ ಎದೆಯಲ್ಲಿ ನೋವು ಅಥವಾ ಒತ್ತಡವನ್ನು ಅನುಭವಿಸುತ್ತಾರೆ.
5. ಅಸಹಜ ಹೃದಯ ಬಡಿತ (ಆರ್ಹೆತ್ಮಿಯಾ): ಹೃದಯ ಬಡಿತವು ತುಂಬಾ ವೇಗವಾಗಿರಬಹುದು, ತುಂಬಾ ನಿಧಾನವಾಗಿರಬಹುದು ಅಥವಾ ಅನಿಯಮಿತವಾಗಿರಬಹುದು.
6. ಮೂರ್ಛೆ ಹೋಗುವುದು ಅಥವಾ ತಲೆತಿರುಗುವುದು: ಇದ್ದಕ್ಕಿದ್ದಂತೆ ಮೂರ್ಛೆ ಹೋಗುವುದು ಅಥವಾ ತಲೆತಿರುಗುವಿಕೆ ಉಂಟಾಗುವುದು ಹೃದಯ ಸಮಸ್ಯೆಯ ಸಂಕೇತವಾಗಿರಬಹುದು.

ಸೂಚನೆ: ಪ್ರಿಯ ಓದುಗರೇ, ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ತಿಳಿಸಲು ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಾಗ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ.ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಏನನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರಿಂದ ಸಲಹೆ ಪಡೆಯಿರಿ.ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News