Urvashi dholakia : ಸೆಲೆಬ್ರಿಟಿಗಳು ತಮ್ಮ ಜೀವನ, ಮದುವೆ-ವಿಚ್ಛೇದನ ಮತ್ತು ವ್ಯವಹಾರಗಳ ವಿಚಾರವಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.. ಈ ಪೈಕಿ 18ನೇ ವಯಸ್ಸಿನಲ್ಲಿ ವಿಚ್ಛೇದನದ ನೋವನ್ನು ಅನುಭವಿಸಿ, ಅವಳಿ ಮಕ್ಕಳ ಜವಾಬ್ದಾರಿ ಹೊತ್ತು ಕಷ್ಟಗಳನ್ನು ಎದುರಿಸಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ ನಟಿಯ ಬಗ್ಗೆ ಈಗ ತಿಳಿದುಕೊಳೋಣ ಬನ್ನಿ..
ಸೆಲೆಬ್ರಿಟಿಗಳ ಜೀವನದಲ್ಲಾಗುವ ಇಂಟ್ರಸ್ಟಿಂಗ್ ವಿಚಾರಗಳ ಕುರಿತು ತಿಳಿಯಲು ಅವರ ಅಭಿಮಾನಿಗಳು ಸದಾ ಉತ್ಸುಕರಾಗಿರುತ್ತಾರೆ. ಅವರ ಮದುವೆ, ಡೇಟಿಂಗ್, ಡಿವೋರ್ಸ್ ವಿಚ್ಛೇದನಗಳ ವಿಚಾರ ಆಗಾಗ ಸದ್ದು ಮಾಡುತ್ತಿರುತ್ತಾರೆ..
ಈ ನಟಿ 16ನೇ ವಯಸ್ಸಿನಲ್ಲಿ ವಿವಾಹವಾದರು.. 17 ನೇ ವಯಸ್ಸಿನಲ್ಲಿ, ಅವಳಿ ಮಕ್ಕಳ ತಾಯಿಯಾದರು.. ನಂತರ ಕೇವಲ 18ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದರು.. ಆ ನಟಿ ಬೇರೆ ಯಾರೂ ಅಲ್ಲ.. ಊರ್ವಶಿ ಧೋಲಾಕಿಯಾ.
ಸಿನಿಮಾಗಳ ಹೊರತಾಗಿಯೂ ಊರ್ವಶಿ ಧೋಲಾಕಿಯಾ ತಮ್ಮ ವೈಯಕ್ತಿಕ ಜೀವನದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ವಿಚ್ಛೇದನದ ನಂತರ ತನ್ನ ಇಬ್ಬರು ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸಿದಳು.
ಇತ್ತೀಚೆಗೆ ನಟಿ ಹೌಸ್ಫ್ಲೈ ಜೊತೆಗಿನ ಸಂದರ್ಶನದಲ್ಲಿ, ತಮ್ಮ ಅವಳಿ ಮಕ್ಕಳಾದ ಕ್ಷಿತಿಜ್ ಮತ್ತು ಸಾಗರ್ನಿಂದ ಹಿಡಿದು ವಿಚ್ಛೇದನದವರೆಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 16ನೇ ವಯಸ್ಸಿನಲ್ಲಿ ವಿವಾಹವಾಗಿ, ಎರಡು ವರ್ಷಗಳ ನಂತರ ಕೇವಲ 18 ವರ್ಷದವಳಿದ್ದಾಗ ವಿಚ್ಛೇದನ ಪಡೆದ ಸಂಗತಿ ಬಹಿರಂಗಪಡಿಸಿದರು.
ವಿಚ್ಛೇದನದ ನಂತರ ತಾನು ಹೇಗೆ ನೋವನ್ನು ಅನುಭವಿಸಿದೆ.. ಅದರಿಂದ ಹೇಗೆ ಹೊರಬಂದೆ ಎಂಬುದನ್ನು ಊರ್ವಶಿ ವಿವರಿಸಿದ್ದಾರೆ. "ಡಿವೋರ್ಸ್ ನಂತರ, ನಾನು ಮಾನಸಿಕವಾಗಿ ಸರಿಯಾಗಲು ಒಂದು ತಿಂಗಳು ನನ್ನ ಕೋಣೆಯಲ್ಲಿ ಬೀಗ ಹಾಕಿಕೊಂಡು ಕೂಡುತ್ತಿದೆ... ಯಾರೊಂದಿಗೂ ಮಾತನಾಡುತ್ತಿದ್ದಿಲ್ಲ" ಅಂತ ಹೇಳಿಕೊಂಡಿದ್ದಾರೆ..
ಅಷ್ಟೇ ಅಲ್ಲ.. ತಮ್ಮ ಮಕ್ಕಳಾದ ಕ್ಷಿತಿಜ್ ಮತ್ತು ಸಾಗರ್ ತಮ್ಮ ತಂದೆಯ ಬಗ್ಗೆ ತಿಳಿದುಕೊಳ್ಳಲು ಎಂದಿಗೂ ಆಸಕ್ತಿ ತೋರಿಸಲಿಲ್ಲ ಎಂದು ಊರ್ವಶಿ ತಿಳಿಸಿದ್ದಾರೆ.. ನಾನು ಅವರಿಗೆ ಹೇಳಲು ತುಂಬಾ ಪ್ರಯತ್ನಿಸಿದರೂ.. ಅವರು ಏನನ್ನೂ ತಿಳಿದುಕೊಳ್ಳಲು ಇಷ್ಟ ಪಡಲಿಲ್ಲ ಎಂದು ಹೇಳಿಕೊಂಡಿದ್ದಾರೆ..
ತನ್ನ ಮಾಜಿ ಪತಿಯ ಬಗ್ಗೆ ಮಾತನಾಡುತ್ತಾ, 'ಅವನು ಎಂದಿಗೂ ತನ್ನ ಮಕ್ಕಳೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ' ಎಂದು ಬಹಿರಂಗಪಡಿಸಿದರು. ಮಕ್ಕಳು ಒಂದೂವರೆ ವರ್ಷದಿಂದಲೂ ತಮ್ಮ ತಂದೆಯೊಂದಿಗೆ ಮಾತನಾಡಿಲ್ಲ. ಅವರನ್ನು ಎಂದಿಗೂ ಭೇಟಿಯಾಗಲಿಲ್ಲ ಎಂದು ಊರ್ವಶಿ ನೋವು ತೋಡಿಕೊಂಡಿದ್ದಾರೆ..