16ನೇ ವಯಸ್ಸಿಗೆ ಮದುವೆ, 18ಕ್ಕೆ ಡಿವೋರ್ಸ್‌, ಈ ನಟಿಯ ಮಕ್ಕಳಿಗೆ ಅಪ್ಪ ಯಾರಂತಾನೇ ಗೊತ್ತಿಲ್ಲ..!

Urvashi dholakia : ಸೆಲೆಬ್ರಿಟಿಗಳು ತಮ್ಮ ಜೀವನ, ಮದುವೆ-ವಿಚ್ಛೇದನ ಮತ್ತು ವ್ಯವಹಾರಗಳ ವಿಚಾರವಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.. ಈ ಪೈಕಿ 18ನೇ ವಯಸ್ಸಿನಲ್ಲಿ ವಿಚ್ಛೇದನದ ನೋವನ್ನು ಅನುಭವಿಸಿ, ಅವಳಿ ಮಕ್ಕಳ ಜವಾಬ್ದಾರಿ ಹೊತ್ತು ಕಷ್ಟಗಳನ್ನು ಎದುರಿಸಿ ಸ್ಟಾರ್‌ ಹೀರೋಯಿನ್‌ ಆಗಿ ಮಿಂಚಿದ ನಟಿಯ ಬಗ್ಗೆ ಈಗ ತಿಳಿದುಕೊಳೋಣ ಬನ್ನಿ..

1 /7

ಸೆಲೆಬ್ರಿಟಿಗಳ ಜೀವನದಲ್ಲಾಗುವ ಇಂಟ್ರಸ್ಟಿಂಗ್‌ ವಿಚಾರಗಳ ಕುರಿತು ತಿಳಿಯಲು ಅವರ ಅಭಿಮಾನಿಗಳು ಸದಾ ಉತ್ಸುಕರಾಗಿರುತ್ತಾರೆ. ಅವರ ಮದುವೆ, ಡೇಟಿಂಗ್‌, ಡಿವೋರ್ಸ್‌ ವಿಚ್ಛೇದನಗಳ ವಿಚಾರ ಆಗಾಗ ಸದ್ದು ಮಾಡುತ್ತಿರುತ್ತಾರೆ..   

2 /7

ಈ ನಟಿ 16ನೇ ವಯಸ್ಸಿನಲ್ಲಿ ವಿವಾಹವಾದರು.. 17 ನೇ ವಯಸ್ಸಿನಲ್ಲಿ, ಅವಳಿ ಮಕ್ಕಳ ತಾಯಿಯಾದರು.. ನಂತರ ಕೇವಲ 18ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದರು.. ಆ ನಟಿ ಬೇರೆ ಯಾರೂ ಅಲ್ಲ.. ಊರ್ವಶಿ ಧೋಲಾಕಿಯಾ.  

3 /7

ಸಿನಿಮಾಗಳ ಹೊರತಾಗಿಯೂ ಊರ್ವಶಿ ಧೋಲಾಕಿಯಾ ತಮ್ಮ ವೈಯಕ್ತಿಕ ಜೀವನದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ವಿಚ್ಛೇದನದ ನಂತರ ತನ್ನ ಇಬ್ಬರು ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸಿದಳು.  

4 /7

ಇತ್ತೀಚೆಗೆ ನಟಿ ಹೌಸ್‌ಫ್ಲೈ ಜೊತೆಗಿನ ಸಂದರ್ಶನದಲ್ಲಿ, ತಮ್ಮ ಅವಳಿ ಮಕ್ಕಳಾದ ಕ್ಷಿತಿಜ್ ಮತ್ತು ಸಾಗರ್‌ನಿಂದ ಹಿಡಿದು ವಿಚ್ಛೇದನದವರೆಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 16ನೇ ವಯಸ್ಸಿನಲ್ಲಿ ವಿವಾಹವಾಗಿ, ಎರಡು ವರ್ಷಗಳ ನಂತರ ಕೇವಲ 18 ವರ್ಷದವಳಿದ್ದಾಗ ವಿಚ್ಛೇದನ ಪಡೆದ ಸಂಗತಿ ಬಹಿರಂಗಪಡಿಸಿದರು.  

5 /7

ವಿಚ್ಛೇದನದ ನಂತರ ತಾನು ಹೇಗೆ ನೋವನ್ನು ಅನುಭವಿಸಿದೆ.. ಅದರಿಂದ ಹೇಗೆ ಹೊರಬಂದೆ ಎಂಬುದನ್ನು ಊರ್ವಶಿ ವಿವರಿಸಿದ್ದಾರೆ. "ಡಿವೋರ್ಸ್‌ ನಂತರ, ನಾನು ಮಾನಸಿಕವಾಗಿ ಸರಿಯಾಗಲು ಒಂದು ತಿಂಗಳು ನನ್ನ ಕೋಣೆಯಲ್ಲಿ ಬೀಗ ಹಾಕಿಕೊಂಡು ಕೂಡುತ್ತಿದೆ... ಯಾರೊಂದಿಗೂ ಮಾತನಾಡುತ್ತಿದ್ದಿಲ್ಲ" ಅಂತ ಹೇಳಿಕೊಂಡಿದ್ದಾರೆ..   

6 /7

ಅಷ್ಟೇ ಅಲ್ಲ.. ತಮ್ಮ ಮಕ್ಕಳಾದ ಕ್ಷಿತಿಜ್ ಮತ್ತು ಸಾಗರ್ ತಮ್ಮ ತಂದೆಯ ಬಗ್ಗೆ ತಿಳಿದುಕೊಳ್ಳಲು ಎಂದಿಗೂ ಆಸಕ್ತಿ ತೋರಿಸಲಿಲ್ಲ ಎಂದು ಊರ್ವಶಿ ತಿಳಿಸಿದ್ದಾರೆ.. ನಾನು ಅವರಿಗೆ ಹೇಳಲು ತುಂಬಾ ಪ್ರಯತ್ನಿಸಿದರೂ.. ಅವರು ಏನನ್ನೂ ತಿಳಿದುಕೊಳ್ಳಲು ಇಷ್ಟ ಪಡಲಿಲ್ಲ ಎಂದು ಹೇಳಿಕೊಂಡಿದ್ದಾರೆ..  

7 /7

ತನ್ನ ಮಾಜಿ ಪತಿಯ ಬಗ್ಗೆ ಮಾತನಾಡುತ್ತಾ, 'ಅವನು ಎಂದಿಗೂ ತನ್ನ ಮಕ್ಕಳೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ' ಎಂದು ಬಹಿರಂಗಪಡಿಸಿದರು. ಮಕ್ಕಳು ಒಂದೂವರೆ ವರ್ಷದಿಂದಲೂ ತಮ್ಮ ತಂದೆಯೊಂದಿಗೆ ಮಾತನಾಡಿಲ್ಲ. ಅವರನ್ನು ಎಂದಿಗೂ ಭೇಟಿಯಾಗಲಿಲ್ಲ ಎಂದು ಊರ್ವಶಿ ನೋವು ತೋಡಿಕೊಂಡಿದ್ದಾರೆ..