ಮುಖ್ಯಮಂತ್ರಿ ವಿಶೇಷ ವಿಮಾನ ಹಾರಾಟ ವೆಚ್ಚ ಎಷ್ಟು ಗೊತ್ತಾ..? 18 ತಿಂಗಳಲ್ಲಿ ಒಟ್ಟಾರೆ ಬರೋಬ್ಬರಿ 23.67 ಕೋಟಿ ಖರ್ಚು. ದಿ ಫೈಲ್ ಆರ್ಟಿಐ ಅಡಿ ಕೋರಿದ್ದ ಅರ್ಜಿಯಲ್ಲಿ ಮಾಹಿತಿ ಬಹಿರಂಗ. ರಾಜ್ಯಪಾಲರು, ಸಚಿವರ ಒಟ್ಟಾರೆ ವೈಮಾನಿಕ ಖರ್ಚು 96.65 ಕೋಟಿ. ಸಿಎಂ ಬಸವರಾಜ ಬೊಮ್ಮಾಯಿಯವರ ಪ್ರಯಾಣದ ವೆಚ್ಚ ದುಪ್ಪಟ್ಟು.
ಕೆಪಿಟಿಸಿಎಲ್ ಮುಷ್ಕರ ವಾಪಾಸ್ ಪಡೆದ ನೌಕರರು. ಆರ್ಡರ್ ಕಾಪಿ ಸಿಗುವವರೆಗೂ ಮುಷ್ಕರ ವಾಪಾಸ್ ಇಲ್ಲ ಎಂದಿದ್ದ ನೌಕರರು. ಸಿಎಂ ನಿವಾಸದ ಬಳಿ ತೆರಳಿದ್ದ ಕೆಪಿಟಿಸಿಎಲ್ ನೌಕರರು. ಸಿಎಂ ಭರವಸೆ ಹಿನ್ನೆಲೆ ಮುಷ್ಕರ ಮಾಡದಿರಲು ತೀರ್ಮಾನ.
ಚುನಾವಣೆ ಬೆನ್ನಲ್ಲೇ ತವರು ಕ್ಷೇತ್ರದಲ್ಲಿ ಸಿಎಂ ರಣಕಹಳೆ. ಅಭಿವೃದ್ಧಿ ಹೆಸರಲ್ಲಿ ಮತಬೇಟೆಗಿಳಿದ ಕಾಮನ್ಮ್ಯಾನ್. ಸಿಎಂ ಬೊಮ್ಮಾಯಿ ಇಂದು ಹಾವೇರಿ ಜಿಲ್ಲಾ ಪ್ರವಾಸ. ಶಿಗ್ಗಾಂವಿ ಕ್ಷೇತ್ರದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ. ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿರುವ ಸಿಎಂ. ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ.
ಸ್ವಗ್ರಾಮ ಕಮಡೊಳ್ಳಿಯಲ್ಲಿ ಬೊಮ್ಮಾಯಿಗೆ ಸನ್ಮಾನ. ಕಮ್ಮಡೊಳ್ಳಿ ಗ್ರಾಮಸ್ಥರಿಂದ ಸನ್ಮಾನ. ಧಾರವಾಡ ಜಿಲ್ಲೆ ಕುಂದಗೋಳ ತಾ. ಕಮ್ಮಡೊಳ್ಳಿ ಗ್ರಾಮ. ಕಲ್ಯಾಣಪುರ ಬಸವಣ್ಣ ಅಜ್ಜಠದ ಶ್ರೀಗಳಿಂದ ಆರ್ಶೀವಚನ. ಸಿಎಂ ಸನ್ಮಾನ ಕಾರ್ಯಕ್ರಮದಲ್ಲಿ ಬಾಲ್ಯದ ಸ್ನೇಹಿತರು ಭಾಗಿ.
ಸ್ನೇಹಿತರು, ಸಂಬಂಧಿಕರನ್ನ ನೋಡಿ ಸಿಎಂ ಭಾವುಕ. ಕಮ್ಮಡೊಳ್ಳಿಯ ತಮ್ಮ ನಿವಾಸದಲ್ಲಿ ಸಿಎಂ ಕಣ್ಣೀರು. ತಮ್ಮ ತಂದೆ ತಾಯಿ ಜನಿಸಿ ಬಾಳಿ ಬದುಕಿದ ಗ್ರಾಮ. ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿದ ಸಿಎಂ. ಸಿಎಂ ಹುದ್ದೆಗೆ ಏರಲು ಸ್ನೇಹಿತರ ಸಹಾಯ ನೆನೆದ ಸಿಎಂ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕೇಂದ್ರ ಕಾಂಗ್ರೆಸ್ನ ಎಟಿಎಂ ಆಗಿತ್ತು ಎಂದು ಸಿರುಗುಪ್ಪ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.. ಬೆಂಗಳೂರು- ಹೆದ್ದಾರಿ ರಸ್ತೆ ಲಂಡನ್ನಲ್ಲೂ ಇಲ್ಲ ಎಂದಿದ್ದಾರೆ..
ಮೈ- ಬೆಂ ಹೈವೇ ಏಕ್ಸಪ್ರೆಸ್ನಲ್ಲಿ ಪ್ರತಿಭಟನೆ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ, ಪ್ರತೀಬಾರಿ ಟೋಲ್ ಪ್ರಾರಂಭವಾದಗ ಸಮಸ್ಯೆ ಕಾಮನ್. ಈಗಾಗಲೇ ಟೋಲ್ ಸಿಬ್ಬಂದಿ ಜೊತೆ ಮಾತನಾಡಿದ್ದೇನೆ. ಟೋಲ್ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಕೆಲ ಹಿರಿಯರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು, ಕಾವೇರಿ ನಿವಾಸದಲ್ಲಿ 40-50 ನಿಮಿಷ ಚರ್ಚೆ ನಡೆಸಿದ್ದಾರೆ.
Koppala : ಕೊಪ್ಪಳ ಜಿಲ್ಲೆಗೆ ಆಗಮಿಸಿದ ಸಿಎಂ. ಗಂಗಾವತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಈ ಕೆಳಗಿನ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿದರು.
CM Bommai : ಕೊಪ್ಪಳದ ಗಂಗಾವತಿಯ ಅಂಜನಾದ್ರಿಗೆ ಆಗಮಿಸಿದ ಸಿಎಂ ಬೊಮ್ಮಾಯಿ..! ಹೆಲಿಕಾಪ್ಟರ್ ಮೂಲಕ ಆಂಜನೇಯನ ದರ್ಶನಕ್ಕೆ ಆಗಮಿಸಿದ ಸಿಎಂ. ಆಂಜನೇಯನ ಮೂರ್ತಿಗೆ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ ಅಂಜನಾದ್ರಿ ಪರ್ವತದ ಕೆಳಭಾಗದಲ್ಲಿ ಪೂಜೆ ಸಲ್ಲಿಸಿದ ಸಿಎಂ.
CM Bommai : ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪದ ಪ್ರಮುಖ ಕೇಂದ್ರವಾದ ಲಕ್ಕುಂಡಿಯನ್ನು ಹಂಪಿ ಸರ್ಕ್ಯೂಟ್ನಲ್ಲಿ ಸೇರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಅಲ್ಲದೇ ಈ ಕುರಿತು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಸಿಎಂ. ಬೊಮ್ಮಾಯಿ ತಿಳಿಸಿದ್ದಾರೆ.
ರೋಣದಲ್ಲಿ 46 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯಾಗಿದೆ. ನರೆಗಲ್ ಮತ್ತು ಗಜೇಂದ್ರ ಗಡಕ್ಕೆ 69 ಕೋಟಿ ರೂ.ಗಳ ವೆಚ್ಚದಲ್ಲಿ ಚಕಲ್ಪಿಸಲಾಗಿದೆ. ಮೂರೂ ನಗರಗಳಿಗೆ ಶುದ್ಧವಾದ ಸಂಸ್ಕರಿಸಿದ ನೀರು ಒದಗಿಸುವ ಯೋಜನೆಯನ್ನು ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.
ಬೊಮ್ಮಾಯಿಗೆ ಆರ್ಶೀವಾದ ಮಾಡಿದ್ದೆ. ಆಗ ಮಿನಿಸ್ಟರ್ ಆದ್ರು. ಬಳಿಕ ಕರುನಾಡಿಗೆ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ್ರು. ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರೆ ಎಂದು ಜೈನಮಂದಿರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪುಜ್ಯರು ಭವಿಷ್ಯ ನುಡಿದರು.
CM Bommai : ನರೇಂದ್ರ ಮೋದಿ ಅವರು ಒಬ್ಬ ಮಹಾನ್ ನಾಯಕ, ನಾವು ಅವರನ್ನು ದೇವರೇಂದಿಲ್ಲ ಮೋದಿಯವರು ತಮ್ಮನ್ನು ದೇವರೇಂದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಧಾನಿ ಮೋದಿ ಇಂದು ವಿಶ್ವನಾಯಕ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.. ಬೆಂಗಳೂರು-ಮೈಸೂರು ಹೈವೇ ಉದ್ಘಾಟನೆ ವೇಳೆ ಮಾತನಾಡಿದ ಸಿಎಂ, ಪಾಕ್ ಸಮಸ್ಯೆ ಬಗೆಹರಿಸೋಕೆ ಕೂಡಾ ಇಂದು ಮೋದಿ ಬೇಕಾಗಿದ್ದಾರೆ ಎಂದಿದ್ದಾರೆ.
Modi in mandya: ಸಕ್ಕರೆನಾಡಿಗೆ ಇಂದು ಮೋದಿ ಆಗಮಿಸಿ 1.8 ಕೀಲೋಮಿಟರ್ ರೋಡ್ ಶೋ ಮಾಡಿದ್ದರು. ಬಳಿಕ ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟಿಸಿದ್ದರು . ಮೈ- ಬೆಂ ಎಕ್ಸ್ ಪ್ರೆಸ್ ಉದ್ಘಾಟನೆ ನಂತರ ಗೆಜ್ಜಲಗೇರಿ ಸಮಾರಂಭದಲ್ಲಿ ಭಾಗಿಯಾದರು.
ಇತ್ತೀಚಿನ ದಿನಗಳಲ್ಲಿ ಮಾಲ್’ಗಳು ಶಾಪಿಂಗ್ ಕಾಂಪ್ಲೆಕ್ಸ್’ಗಳು ಬಂದಿವೆ. ಸ್ವಲ್ಪ ದಿನ ವ್ಯಾಪಾರ ಚೆನ್ನಾಗಿ ಆದರೂ ಸ್ವಲ್ಪ ದಿನಗಳಲ್ಲಿ ಕಡಿಮೆಯಾಗುತ್ತದೆ. ಏನೇ ಬಂದರೂ ಕಿರಾಣಿ ಅಂಗಡಿ ವ್ಯಾಪಾರ ಕಡಿಮೆಯಾಗುವುದಿಲ್ಲ. ಕಾಳು ಕಡ್ಡಿ ಕೊಳ್ಳುವವರು ಹೆಚ್ಚಿದ್ದಾರೆ. ದರ ಮತ್ತು ತೂಕ ಸರಿಯಾಗಿ ನೀಡಿದರೆ ಗ್ರಾಹಕರು ಸಂತೋಷದಿಂದಿರುತ್ತಾರೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯ ಆದರ್ಶನಗರದಲ್ಲಿನ ನಿವಾಸ ತಡರಾತ್ರಿಯಲ್ಲೂ ಸಾರ್ವಜನಿಕ ಅಹವಾಲು ಸ್ವೀಕಸಿದ್ದಾರೆ.. ಧಾರವಾಡ, ಶಿಗ್ಗಾಂವಿ ಸೇರಿ ಹಲವು ಕಡೆಗಳಿಂದ ಆಗಮಿಸಿದ್ದ ಜನರ ಅಹವಾಲು ಸ್ವೀಕರಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.