ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ಗೆ ಬಿಜೆಪಿ ಶಾಸಕರು ಸೇರಿ ಕೇಸರಿ ಶಾಲು ಹಾಕಿದ್ದಾರೆ. ರಾಜುಗೌಡ ಮತ್ತು ರೇಣುಕಾಚಾರ್ಯ ಸೇರಿ 2 ಕೇಸರಿ ಶಾಲು ಹಾಕಿದ್ದಾರೆ. ಕೇಸರಿ ಶಾಲು ತೆಗೆಯಲು ಬಿಡದೇ ಎಳೆದಾಡಿದ್ದಾರೆ. ಈ ವೇಳೆ ಬೈರತಿ ಸುರೇಶ್, ಅಶೋಕ್ ಅಣ್ಣ ನೋಡಿ ಬಲವಂತವಾಗಿ ನನಗೆ ಕೇಸರಿ ಶಾಲು ಹಾಕ್ತಿದ್ದಾರೆ ಎಂದು ಕೂಗಿದ್ದಾರೆ..
ಇತ್ತೀಚೆಗೆಯಷ್ಟೇ ಅಂದರೆ ಮೇ 20 ರಂದು, ದೋಣಿ ತಲುಪುವ ವೇಳೆಗೆ ಕಾಲುಗಳು ಒದ್ದೆಯಾಗುತ್ತವೆ ಎಂದು ಲ್ಯಾಮ್ಡಿಂಗ್ ಶಾಸಕ ಶಿಬು ಮಿಶ್ರಾ, ಬೇರೊಬ್ಬರ ಹೆಗಲನ್ನು ಏರಿ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಿದ್ದರು. ಈ ನಡವಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ಆರ್ಎಸ್ಎಸ್ ನವರು ಯಾರಿಗೂ ಉತ್ತರ ಕೊಡೋದಕ್ಕೆ ಹೋಗೋದಿಲ್ಲ. ರಾಷ್ಟ್ರಾಭಿಮಾನಿಗಳ ಸಂಘ ಆರ್ಎಸ್ಎಸ್, ಸಂಘದ ಸಂಸ್ಕಾರ ಪಡೆದುಕೊಂಡವರು ಎಲ್ಲ ಕ್ಷೇತ್ರದಲ್ಲಿ ಇದಾರೆ. ಅದಕ್ಕಾಗಿ ದೇಶ ಇಂದು ಸುಭದ್ರವಾಗಿದೆ.
ಸ್ವಪಕ್ಷಷದವರ ವಿರುದ್ಧವೇ ಸದಾ ಟೀಕಾಪ್ರಹಾರ ನಡೆಸುತ್ತಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯಲ್ಲಿ ಒಬ್ಬ ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ ಎಂದು ಹೇಳುವ ಮೂಲಕ ಸ್ವಪಕ್ಷೀಯರ ವಿರುದ್ಧವೇ ಗುಡುಗಿದ್ದಾರೆ.
ಡಿಕೆಶಿಗೆ ನನ್ನ ಭಯ ಬಗ್ಗೆ ಶುರುವಾಗಿದೆ. ಯತ್ನಾಳ್ ಸಿಎಂ ಆದ್ರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿಕೆಶಿಗೆ ಇದೆ. ಮತ್ತೆ ಅದೆ ಜಾಗಕ್ಕೆ (ಜೈಲಿಗೆ) ಹೋಗಬೇಕಾಗುತ್ತೆ ಅನ್ನೋ ಭಯ ಶುರುವಾಗಿದೆ.
ತಮ್ಮ ಪಕ್ಷದ ನಾಯಕರ ಬಗ್ಗೆಯೇ ಭ್ರಷ್ಟಾಚಾರದ ಆರೋಪ ಮಾಡುತ್ತ ನಗೆ ಚಟಾಕಿ ಹಾರಿಸುವ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ದುಡ್ದೇ ದೊಡ್ಡಪ್ಪ ಎಂದಿರುವ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಏಳುಸುವಂತೆ ಮಾಡಿದೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜೆ.ಪಿ. ನಡ್ಡಾ ಹಾಗೂ ಇತರೆ ನಾಯಕರ ಜತೆ ಈ ವಿಚಾರದ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಇದು ಈ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗಬೇಕಾದ ವಿಷಯ. ಬಿಜೆಪಿ ಆಡಳಿತದಲ್ಲಿ ಸಬ್ ಇನ್ಸ್ಪೆಕ್ಟರ್, ಪಿಎಸ್ಐ ಸೇರಿದಂತೆ ವಿವಿಧ ಇಲಾಖೆ ಹುದ್ದೆಗಳ ನೇಮಕಾತಿಗೆ ಇಂತಿಷ್ಟು ಎಂದು ಹಣ ನಿಗದಿಯಾಗಿದೆ- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಅನಭಾಗ್ಯ ಯೋಜನೆ ಜನರನ್ನ ದರಿದ್ರ ಮಾಡುತ್ತೆ. ಈ ಯೋಜನೆಗಳನ್ನ ಬಂದ್ ಮಾಡಿ. ಯೋಜನೆ ಬಂದ್ ಮಾಡಲು ಧೈರ್ಯ ಮಾಡಿ ಆಗಿದ್ದಾಗಲಿ. ದೇವರ ಹಿಪ್ಪರಗಿ ಶಾಸಕರ ಮೇಲೆ ಸಿಎಂ ಗೆ ಲವ್ ಇದೆ ಎಂದು ಚಟಾಕಿ ಹಾರಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.