Vastu Tips for Your Home: ಹಿಂದೂ ಧರ್ಮದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ವಾಸ್ತು ದೋಷದ ಬಗ್ಗೆ ಎಚ್ಚರದಿಂದಿರಬೇಕು. ಗ್ರಹ-ನಕ್ಷತ್ರಗಳು ಅಥವಾ ದೇವರು-ದೇವತೆಗಳು ಕೋಪಗೊಳ್ಳದಂತೆ ಅನೇಕರು ತಮ್ಮ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ವಾಸ್ತು ಪ್ರಕಾರವೇ ಇಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ವಾಸ್ತುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ. ಇದರಿಂದ ಅವರ ಜೀವನದಲ್ಲಿ ಅನೇಕ ಸಮಸ್ಯೆಗಳು ನಡೆದರೂ, ಆ ಸಮಸ್ಯೆಗಳಿಗೆ ಕಾರಣವೇನು ಅನ್ನೋದರು ಅವರಿಗೆ ಅರ್ಥವಾಗುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಆರ್ಥಿಕ ಪ್ರಗತಿಗೆ ಹಲವು ಪರಿಹಾರಗಳನ್ನು ನೀಡಲಾಗಿದೆ. ನಿಮ್ಮ ಇಚ್ಛೆಯಂತೆ ಮನೆಯನ್ನು ನಿರ್ಮಿಸಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಕೆಲವು ವಸ್ತುಗಳನ್ನು ಇರಿಸಬೇಕು. ಹೀಗೆ ಮಾಡಿದ್ರೆ ನೀವು ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಕಾರಿಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಆ ವಾಸ್ತು ಸಲಹೆಗಳು ಯಾವುವು ಎಂದು ತಿಳಿಯಿರಿ...
ಉತ್ತರ ಮತ್ತು ಪೂರ್ವ ದಿಕ್ಕು
ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರಬಾರದು ಎಂದರೆ, ಈಶಾನ್ಯ ದಿಕ್ಕಿನಲ್ಲಿ ಯಾವುದೇ ಭಾರವಾದ ವಸ್ತುಗಳು, ಜಂಕ್ ಇತ್ಯಾದಿಗಳನ್ನು ಇಡಬೇಡಿ. ಇಲ್ಲಿ ನೀರಿನಿಂದ ತುಂಬಿದ ನೀಲಿ ಗಾಜಿನ ಪಾತ್ರೆಯನ್ನು ಇರಿಸಬೇಕು. ಸಾಧ್ಯವಾದರೆ ಈಶಾನ್ಯ ದಿಕ್ಕಿನಲ್ಲಿ ಬೆಳ್ಳಿಯ ಪೆಟ್ಟಿಗೆಯನ್ನು ಇರಿಸಿ. ನಿಮ್ಮ ಮನೆಯ ಈ ದಿಕ್ಕಿನಲ್ಲಿ ಕಿಟಕಿ ಇದ್ದರೆ, ಅದನ್ನು ಆಗಾಗ ತೆರೆಯುತ್ತಿರಿ.
ಇದನ್ನೂ ಓದಿ: ಮಹಾ ಶಿವರಾತ್ರಿ ದಿನ ಮನೆಗೆ ಈ 5 ವಸ್ತುಗಳನ್ನು ತಂದರೆ ತುಂಬಾ ಒಳ್ಳೆಯದು..!
ಮನೆಯ ಮುಖ್ಯ ದ್ವಾರ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಎಲ್ಲಾ ಪ್ರಮುಖ ಶಕ್ತಿಯು ಮುಖ್ಯ ದ್ವಾರದ ಮೂಲಕ ಬರುತ್ತದೆ. ಆದ್ದರಿಂದ ನಿಮ್ಮ ಮುಖ್ಯ ಬಾಗಿಲಿನ ಮೇಲೆ ಕಲಶ, ಮೀನು, ಕಮಲ, ಶಂಖ ಮುಂತಾದ ಶುಭ ಚಿಹ್ನೆಗಳನ್ನು ಇರಿಸಿ ಅಥವಾ ಓಂ ಮತ್ತು ಸ್ವಸ್ತಿಕ ಚಿಹ್ನೆಗಳನ್ನು ಮುಖ್ಯ ದ್ವಾರದ ಮೇಲೆ ಇರಿಸಿ. ಇದು ಮನೆಯಲ್ಲಿ ಶುಭವನ್ನು ಕಾಪಾಡಿಕೊಳ್ಳುತ್ತದೆ.
ಕಮಲದ ಬೀಜಗಳ ಹಾರ
ನೀವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೆ, ಮನೆಯ ದೇವರಕೋಣೆಯಲ್ಲಿ ಸ್ವಲ್ಪ ಸಮಯದವರೆಗೆ ಕಮಲದ ಬೀಜಗಳ ಹಾರವನ್ನು ಅರ್ಪಿಸಿ. ನಂತರ ಅದನ್ನು ತಿಜೋರಿಯಲ್ಲಿ ಇರಿಸಿ. ಇದು ತಾಯಿ ಲಕ್ಷ್ಮಿದೇವಿಯನ್ನು ಮೆಚ್ಚಿಸುತ್ತದೆ. ಅಲ್ಲದೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ.
ಶನಿವಾರ ಈ ಪರಿಹಾರ ಮಾಡಿ
ನಿಮ್ಮ ಮನೆಯಲ್ಲಿ ಏನಾದರೂ ಅಶುಭ ಸಂಭವಿಸುತ್ತಿದ್ದರೆ, ಶನಿವಾರದಂದು ಸ್ವಲ್ಪ ಹಸಿ ಹಾಲು, ಸಕ್ಕರೆ, ತುಪ್ಪವನ್ನು ಉಕ್ಕಿನ ಪಾತ್ರೆಯಲ್ಲಿ ಬೆರೆಸಿ ಅರಳಿ ಮರಕ್ಕೆ ಅರ್ಪಿಸಿರಿ. ಕಡಲೆ ಮತ್ತು ಬೆಲ್ಲವನ್ನು ಸಹ ಅರ್ಪಿಸಿರಿ. ಇದು ಮನೆಯಲ್ಲಿ ಶುಭ ಯೋಗವನ್ನು ಸೃಷ್ಟಿಸುತ್ತದೆ.
ಗೋಮತಿ ಚಕ್ರ
ಗೋಮತಿ ಚಕ್ರವು ತಾಯಿ ಲಕ್ಷ್ಮಿದೇವಿಯ ಆಶೀರ್ವಾದವನ್ನು ನೀಡುತ್ತದೆ. ಇದನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. 11 ಗೋಮತಿ ಚಕ್ರಗಳನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿ ಇಡುವುದರಿಂದ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಮಹಾಶಿವರಾತ್ರಿಯ ನಂತರ ಕುಂಭ ರಾಶಿಯಲ್ಲಿ ಶನಿ ಅಸ್ತ; ಈ ನಾಲ್ಕು ರಾಶಿಯ ಜನರಿಗೆ ಸಮಸ್ಯೆಗಳು ಹೆಚ್ಚಾಗಲಿವೆ!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.