ಮಹಾಶಿವರಾತ್ರಿಯ ನಂತರ ಕುಂಭ ರಾಶಿಯಲ್ಲಿ ಶನಿ ಅಸ್ತ; ಈ ನಾಲ್ಕು ರಾಶಿಯ ಜನರಿಗೆ ಸಮಸ್ಯೆಗಳು ಹೆಚ್ಚಾಗಲಿವೆ!!

Shani Asta 2025: ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯನ್ನು ನ್ಯಾಯ ಮತ್ತು ಕರ್ಮದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿಯು ಯಾವುದೇ ಒಬ್ಬ ವ್ಯಕ್ತಿಯ ಕರ್ಮಗಳ ಆಧಾರದ ಮೇಲೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಶನಿದೇವನು ಯಾವಾಗ ಅಸ್ತಮಿಸುತ್ತಾನೆ? ಅದರಿಂದ ಯಾವ ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ ಅನ್ನೋದರ ಬಗ್ಗೆ ತಿಳಿಯಿರಿ...

Shani Asta 2025: ಶನಿಯು ಫೆಬ್ರವರಿ 27ರ ಬೆಳಗ್ಗೆ 12.09ಕ್ಕೆ ಕುಂಭ ರಾಶಿಯಲ್ಲಿ ಸ್ಥಾನ ಪಡೆಯುತ್ತಾನೆ. ನಂತರ ಏಪ್ರಿಲ್ 4ರ ಬೆಳಗ್ಗೆ 6.37ಕ್ಕೆ ಉದಯಿಸುತ್ತಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿದೇವನನ್ನು ಕುಂಭ ರಾಶಿಯ ಆಳುವ ಗ್ರಹವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಶನಿಯು ತನ್ನದೇಯಾದ ರಾಶಿಯಲ್ಲಿ ಸ್ಥಾನಪಲ್ಲಟಗೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಅಸ್ತಮಿಸಿದ ನಂತರ ಶನಿಯು ದುರ್ಬಲ ಸ್ಥಿತಿಯಲ್ಲಿರುತ್ತಾನೆ. ಆದರೆ ಈ ಸಮಯದಲ್ಲಿ ಸೂರ್ಯ ಮತ್ತು ಶನಿಯ ಸಂಯೋಗವು ಕುಂಭ ರಾಶಿಯಲ್ಲಿ ಇರುತ್ತದೆ. ಸೂರ್ಯ ಮತ್ತು ಶನಿ ಪರಸ್ಪರ ಶತ್ರುಗಳು, ಆದ್ದರಿಂದ ಅಸ್ತಮಿಸಿದ ನಂತರವೂ ಶನಿಯು ಅನೇಕ ರಾಶಿಗಳಿಗೆ ತೊಂದರೆ ಅಂದರೆ ಸಂಕಷ್ಟಗಳನ್ನ ನೀಡುತ್ತಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಶನಿ ಗ್ರಹವು ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದೆ. ಶನಿದೇವನು 2023ರ ಜನವರಿ 17ರಂದು ಕುಂಭ ರಾಶಿಯನ್ನು ಪ್ರವೇಶಿಸಿದನು. ವೈದಿಕ ಜ್ಯೋತಿಷ್ಯದ ಪ್ರಕಾರ, ಒಂಬತ್ತು ಗ್ರಹಗಳಲ್ಲಿ ಶನಿದೇವನು ಅತ್ಯಂತ ನಿಧಾನವಾದ ವೇಗವನ್ನು ಹೊಂದಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಶನಿಯು ಬಲವಾದ ಸ್ಥಾನದಲ್ಲಿದ್ದರೆ ಆ ವ್ಯಕ್ತಿಗೆ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ.

2 /7

ಇದೇ ಮಾರ್ಚ್ 29ರಂದು ಶನಿಯು ಮೀನ ರಾಶಿಗೆ ಪ್ರವೇಶಿಸಿದ ತಕ್ಷಣ, ಕೆಲವು ರಾಶಿಗಳಲ್ಲಿ ಸಾಡೇಸಾತಿ ಮತ್ತು ಧೈಯ್ಯಾ ಪ್ರಾರಂಭವಾಗುತ್ತವೆ. ಆದರೆ ಕೆಲವು ರಾಶಿಗಳಲ್ಲಿ ಅದು ಕೊನೆಗೊಳ್ಳುತ್ತದೆ. ಈ ವರ್ಷ ಮಕರ ರಾಶಿಯವರಿಗೆ ಸಾಡೇ ಸಾತಿ ಕೊನೆಗೊಳ್ಳುತ್ತದೆ, ಆದರೆ ಮೇಷ ರಾಶಿಯವರಿಗೆ ಸಾಡೇ ಸಾತಿ ಪ್ರಾರಂಭವಾಗುತ್ತದೆ. ಮೀನ ರಾಶಿಯಲ್ಲಿ ಶನಿಯ ಸಂಚಾರದೊಂದಿಗೆ, ಮೀನ ರಾಶಿಯ ಜನರಲ್ಲಿ ಎರಡನೇ ಹಂತದ ಸಾಡೇಸಾತಿ ಆರಂಭವಾಗುತ್ತದೆ, ಕೊನೆಯ ಹಂತದ ಕುಂಭ ರಾಶಿಯವರಲ್ಲಿ ಮತ್ತು ಮೊದಲ ಹಂತದ ಮೇಷ ರಾಶಿಯವರಲ್ಲಿ ಆರಂಭವಾಗುತ್ತದೆ. ಇದಲ್ಲದೆ ವೃಶ್ಚಿಕ ರಾಶಿಯ ಜನರಿಗೆ ಧೈಯಾ ಕೊನೆಗೊಳ್ಳುತ್ತದೆ, ಆದರೆ ಧನು ರಾಶಿಯವರಿಗೆ ಧೈಯಾ ಪ್ರಾರಂಭವಾಗುತ್ತದೆ. ಮಹಾಶಿವರಾತ್ರಿಯ ನಂತರ ಶನಿಗ್ರಹವು ಅಸ್ತಮಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ರಾಶಿಗಳು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಲಿವೆ ಎಂದು ತಿಳಿಯಿರಿ.

3 /7

ಮೇಷ ರಾಶಿಯವರಿಗೆ, ಶನಿಯು ಅಸ್ತಮಿಸಿದಾಗ ಕುಟುಂಬದಲ್ಲಿ ವಿವಾದಗಳು ಉಂಟಾಗಬಹುದು. ಇದರ ಅಡ್ಡಪರಿಣಾಮಗಳು ನಿಮ್ಮ ಇಮೇಜ್‌ಗೆ ಹಾನಿ ಮಾಡಬಹುದು. ಹೀಗಾಗಿ ಮಾತನಾಡುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ನೀವು ಎಲ್ಲೋ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಎಚ್ಚರಿಕೆಯಿಂದ ಯೋಚಿಸಿ ಮತ್ತು ತಜ್ಞರಿಂದ ಸಲಹೆ ಪಡೆಯಿರಿ, ಇಲ್ಲದಿದ್ದರೆ ನಷ್ಟವನ್ನು ಎದುರಿಸಬೇಕಾಗಬಹುದು.

4 /7

ಕರ್ಕಾಟಕ ರಾಶಿಯಲ್ಲಿ ಜನಿಸಿದ ಜನರು ಶನಿಗ್ರಹವು ಅಸ್ತಮಿಸಿದ ನಂತರ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮಗೆ ವೃತ್ತಿ ಸಂಬಂಧಿತ ಸಮಸ್ಯೆಗಳು ಉದ್ಭವಿಸಬಹುದು, ಆದ್ದರಿಂದ ಈ ಸಮಯವನ್ನು ಎಚ್ಚರಿಕೆಯಿಂದ ಕಳೆಯಿರಿ. ಶನಿಯ ಅಸ್ತಮದ ಸಮಯದಲ್ಲಿ, ನೀವು ಕಚೇರಿ ರಾಜಕೀಯಕ್ಕೆ ಬಲಿಯಾಗಬಹುದು ಮತ್ತು ಆರ್ಥಿಕ ನಷ್ಟವನ್ನು ಸಹ ಅನುಭವಿಸಬಹುದು. ಇದಲ್ಲದೆ ನಿಮಗೆ ಹತ್ತಿರವಿರುವ ಜನರೊಂದಿಗೆ ಭಿನ್ನಾಭಿಪ್ರಾಯದ ಪರಿಸ್ಥಿತಿ ಉದ್ಭವಿಸಬಹುದು, ಆದ್ದರಿಂದ ಯಾವುದೇ ವಿಷಯದ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. 

5 /7

ಸಿಂಹ ರಾಶಿಯ ಅಧಿಪತಿ ಸೂರ್ಯ ಮತ್ತು ಅದು ತನ್ನ ಶತ್ರು ಗ್ರಹವಾದ ಶನಿಯ ಹತ್ತಿರ ಇರುತ್ತದೆ. ಈ ಕಾರಣಕ್ಕೆ ಶನಿಯ ಅಸ್ತಮವು ಸಿಂಹ ರಾಶಿಗೆ ಹಾನಿಯನ್ನುಂಟುಮಾಡಬಹುದು. ಈ ಸಮಯದಲ್ಲಿ ನಿಮ್ಮ ವ್ಯವಹಾರದಲ್ಲಿಯೂ ಸಮಸ್ಯೆಗಳಾಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯೊಂದಿಗೆ ವಾದ ಉಂಟಾಗಬಹುದು, ಹೀಗಾಗಿ ಶಾಂತವಾಗಿರಿ. ಆರ್ಥಿಕ ನಷ್ಟದ ಸಾಧ್ಯತೆಯೂ ಇದೆ.

6 /7

ಮಕರ ರಾಶಿಯವರಿಗೆ ಶನಿಯು ಅಧಿಪತಿಯಾಗಿದ್ದು, ಶನಿಯ ಅಸ್ತಮಾನವು ಒತ್ತಡ ಮತ್ತು ನಷ್ಟವನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಹೇಳುವ ಮಾತುಗಳು ಯಾರಿಗಾದರೂ ಹಾನಿ ಮಾಡಬಹುದು. ನಿಮ್ಮ ಮಾತುಗಳಿಂದ ಜನರು ಕೋಪಗೊಳ್ಳಬಹುದು. ಹೀಗಾಗಿ ನೀವು ಎಚ್ಚರಿಕೆಯಿಂದ ಮಾತನಾಡುವುದು ಉತ್ತಮ.

7 /7

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)