Actress Life : ಇಂದು ಬಾಲಿವುಡ್ ಅನ್ನು ಆಳುತ್ತಿರುವ ಈ ನಟಿ ಒಂದು ಕಾಲದಲ್ಲಿ ಮನೆಯಿಂದ ಹೊರ ಬಂದು ಹೋಟೆಲ್‌ನಲ್ಲಿ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು. ತಂದೆಯ ವಿರುದ್ಧ ತಿರುಗಿಬಿದ್ದು ಸಿನಿಮಾಗಾಗಿ ಮನೆ ಬಿಟ್ಟು ಬಂದು.. ಸಿನಿಮಾಗಳಿಗಾಗಿ ಲಿಂಗ ಬದಲಾವಣೆಗೆ ಒಳಗಾಗಿದ್ದರು.. ಈ ಹೀರೋಯಿನ್ ಇಂದು ಕೋಟಿಗಳ ಒಡತಿ..
ಇಂದು ಅನೇಕ ನಟಿಯರ ತಮ್ಮ ಕಠಿಣ ಪರಿಶ್ರಮದಿಂದ ಬಾಲಿವುಡ್‌ನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅನೇಕ ಹೀರೋಯಿನ್‌ಗಳಿಗೆ ಅವರ ಕುಟುಂಬಗಳಿಂದಲೂ ಬೆಂಬಲ ಸಿಗಲಿಲ್ಲ. ಸಾಲು ಸಾಲು ಸಂಕಷ್ಟ.. ಅವುಗಳ ನಡುವೆಯೂ ಹಿಂದೆ ಸರಿಯದೇ ತಮ್ಮ ಸೌಂದರ್ಯ ಮತ್ತು ನಟನೆಯ ಬಲದಿಂದ ಉದ್ಯಮದಲ್ಲಿ ಇಂದು ಛಾಪು ಮೂಡಿಸಿದ್ದಾರೆ.. ಅಂತಹ ನಟಿಯರಲ್ಲಿ ಇವರೂ ಒಬ್ಬರು..
ಪ್ರಸ್ತುತ ಸುದ್ದಿಯಲ್ಲಿರುವ ಈ ನಟಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.. ಕೆಲಸದ ಜೊತೆ ಚಲನಚಿತ್ರಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ನಟಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ನಿರ್ಧರಿಸಿದರು. ಇಂದು ಈಕೆಗೆ ಯಾವುದೇ ಪರಿಚಯದ ಅಗತ್ಯವಿಲ್ಲ... ಆ ನಟಿ ಬೇರೆ ಯಾರೂ ಅಲ್ಲ, ವಾಣಿ ಕಪೂರ್ (Vaani Kapoor).
ಬಾಲಿವುಡ್‌ನಲ್ಲಿ ವೃತ್ತಿಜೀವನ ಮುಂದುವರಿಸಲು ವಾಣಿಗೆ ತನ್ನ ತಂದೆಯಿಂದ ಬೆಂಬಲ ಸಿಗಲಿಲ್ಲ. ಆದರೂ ನಿರ್ಧಾರ ಬದಲಿಸದೆ ತಂದೆಯ ವಿರುದ್ಧವಾಗಿ ನಿಂತು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ವಿಪರ್ಯಾಸ ಅಂದ್ರೆ ತಾಯಿಯಿಂದಲೂ ಸಪೋರ್ಟ್ ಸಿಗಲಿಲ್ಲ ವಾಣಿಗೆ..
ನಟಿ ವಾಣಿಯವರ ತಂದೆಗೆ ಮಾಡೆಲಿಂಗ್ ಇಷ್ಟವಾಗಲಿಲ್ಲ... ತನ್ನ ತಂದೆಯ ಕೋಪದ ಹೊರತಾಗಿಯೂ ತನ್ನದೇ ಆದ ಗುರುತನ್ನು ಸೃಷ್ಟಿಸಿಕೊಂಡು ತನ್ನ ಕನಸನ್ನು ನನಸಾಗಿಸಿಕೊಂಡರು. ಇದಲ್ಲದೆ, 'ಚಂಡೀಗಢ ಕರೇ ಆಶಿಕಿ' ಚಿತ್ರದಲ್ಲಿ, ಲಿಂಗವನ್ನು ಬದಲಾವಣೆ ಮಾಡಿಕೊಳ್ಳುವ ಹುಡುಗಿ ನಟಿಸಿ ಸೈ ಎನಿಸಿಕೊಂಡರು.
ಇಂದು, ವಾಣಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ನಿಜ ಹೇಳಬೇಕೆಂದರೆ, 'ಶುದ್ಧ್ ದೇಸಿ ರೋಮ್ಯಾನ್ಸ್' ಚಿತ್ರದ ನಂತರ ವಾಣಿಯ ಜನಪ್ರಿಯತೆ ಗಮನಾರ್ಹವಾಗಿ ಹೆಚ್ಚಾಯಿತು. ಮಾಧ್ಯಮ ವರದಿಗಳ ಪ್ರಕಾರ, 2022 ರಲ್ಲಿ ವಾಣಿ ಕಪೂರ್ ಅವರ ಸಂಪತ್ತು ಸುಮಾರು 10 ಕೋಟಿ ರೂ.ಗಳಷ್ಟಿತ್ತು.
ನೆಟ್‌ವರ್ತ್‌ಪೀಡಿಯಾ ಪ್ರಕಾರ, ವಾಣಿ ಸುಮಾರು 375 ಮಿಲಿಯನ್ ರೂಪಾಯಿ ಮೌಲ್ಯದ ಆಸ್ತಿಯನ್ನು (Vaani Kapoor net worth) ಹೊಂದಿದ್ದಾರೆ. ಈ ನಟಿಗೆ ದೆಹಲಿ ಮತ್ತು ಮುಂಬೈನಲ್ಲಿ ಸ್ವಂತ ಮನೆ ಇದೆ. ಇದಲ್ಲದೆ, ಹಲವು ದುಬಾರಿ ಕಾರುಗಳೂ ಇವೆ. ವಾಣಿ ಸಿನಿಮಾ ಮತ್ತು ಜಾಹೀರಾತುಗಳ ಮೂಲಕ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಇದಲ್ಲದೆ, ಸಾಮಾಜಿಕ ಮಾಧ್ಯಮದ ಮೂಲಕವೂ ಹಣ ಸಂಪಾದಿಸುತ್ತಾರೆ.
ನಟಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಸುಂದರಿಗೆ ದೊಡ್ಡ ಅಭಿಮಾನಿ ಬಳಗವಿದೆ. ನಟಿ ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತ ಫ್ಯಾನ್ಸ್‌ಗೆ ಹತ್ತಿರವಾಗಿರುತ್ತಾರೆ.