ಕೇವಲ 3 ನಿಮಿಷಕ್ಕೆ 3 ಕೋಟಿ ರೂಪಾಯಿ..! ಈ ಹಾಟ್‌ ನಟಿಗೆ ಫುಲ್‌ ಡಿಮ್ಯಾಂಡ್‌.. ಸಾಲು ಗಟ್ಟಿನಿಲ್ಲಬೇಕು...

Actress Life : ಈಕೆ ಬೇಕು ಅಂದ್ರೆ ಸಾಲು ಗಟ್ಟಿ ನಿಲ್ಲಬೇಕು ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ 3 ನಿಮಿಷಕ್ಕೆ ಕೋಟಿ ರೂಪಾಯಿ ಬೇರೆ ತೆಗೆದುಕೊಳ್ಳುತ್ತಾಳೆ.. ಸತತವಾಗಿ ಸೋಲು ಅನುಭವಿಸುತ್ತಿದ್ದ ಈ ಸುಂದರಿಗೆ ಈ ಫುಲ್‌ ಡಿಮ್ಯಾಂಡ್‌ ಶುರುವಾಗಿದೆ.. ಯಾರು ಈ ಸುಂದರಿ.. ಅಸಲಿ ಕಥೆ ಏನು..? ಬನ್ನಿ ನೋಡೋಣ..  
 

1 /9

ಇತ್ತೀಚೆಗೆ ಬಿಡುಗಡೆಯಾದ ಡಾಕು ಮಹಾರಾಜ್ ಚಿತ್ರದ ಹಾಡೊಂದು ವೈರಲ್ ಆಗಿತ್ತು. ಬಾಲಯ್ಯ ಮತ್ತು ಊರ್ವಶಿ ರೌಟೇಲಾ ನೃತ್ಯ ಮಾಡಿದ ಈ ಹಾಡು ಭಾರಿ ಕ್ರೇಜ್ ಸೃಷ್ಟಿಸಿತು. ಬಿಡುಗಡೆಯಾದಾಗ ಟ್ರೋಲ್‌ಗೆ ಒಳಗಾದ ಈ ಹಾಡು ನಂತರ ಸಂಚಲನ ಮೂಡಿಸಿತು.  

2 /9

ಡಾಕು ಮಹಾರಾಜ್ ಚಿತ್ರದಲ್ಲಿನ ಡಬಿಡಿ ದಿಬಿಡಿ ಹಾಡಿನಲ್ಲಿ ಕೇವಲ 3 ನಿಮಿಷ ಕಾಣಿಸಿಕೊಂಡು ಊರ್ವಶಿ ರೌಟೇಲಾ ಸುದ್ದಿಯಾದರು. ನಂದಮೂರಿ ಬಾಲಕೃಷ್ಣ ನಟಿಸಿದ ಈ ಆಕ್ಷನ್ ಚಿತ್ರದ ವಿಶೇಷ ಆಕರ್ಷಣೆ ಅಂದ್ರೆ ಈ ಚೆಲುವೆ ಅಂತ ಹೇಳಬಹುದು..  

3 /9

ಆದರೆ ಇಷ್ಟು ಸಣ್ಣ ಪಾತ್ರಕ್ಕೆ ಊರ್ವಶಿ ಪಡೆದ ಸಂಭಾವನೆ ಎಷ್ಟು ಗೊತ್ತೆ..? ಈ 3 ನಿಮಿಷಗಳ ಹಾಡಿಗೆ ಈ ಬ್ಯೂಟಿ ಬರೊಬ್ಬರಿ 3 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದರರ್ಥ ಒಂದು ನಿಮಿಷಕ್ಕೆ ಒಂದು ಕೋಟಿ ರೂಪಾಯಿಗಳನ್ನು ಗಳಿಸಿದಳು.  

4 /9

ಹಲವಾರು ಚಿತ್ರಗಳು ಸೋತರೂ ಊರ್ವಶಿ ರೌಟೇಲಾ ಅವರ ಸಂಭಾವನೆ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಬೇಡಿಕೆಯ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ. ಊರ್ವಶಿಯವರ ಒಟ್ಟು ಆಸ್ತಿ ಸುಮಾರು 236 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.  

5 /9

ಊರ್ವಶಿ ಸಾಮಾಜಿಕ ಮಾಧ್ಯಮದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 73 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. ಅಷ್ಟೇ ಅಲ್ಲ, ಈ ಸುಂದರಿ ಹಂಚಿಕೊಳ್ಳುವ ಫೋಟೋಗಳು ಮತ್ತು ವೀಡಿಯೊಗಳು ಕ್ಷಣಾರ್ಧಲ್ಲಿ ವೈರಲ್ ಆಗುತ್ತವೆ.  

6 /9

'ಡಾಕು ಮಹಾರಾಜ್' ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಡ್ಯಾಷಿಂಗ್‌ ಪಾತ್ರವನ್ನು ನಿರ್ವಹಿಸಿದ್ದರು. ಅನ್ಯಾಯದ ವಿರುದ್ಧ ಹೋರಾಡುವ ಪ್ರಾಮಾಣಿಕ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಡಾಕು ಮಹಾರಾಜ್ ಎಂಬ ಡಕಾಯಿತನ ಕಥೆಯನ್ನು ಹೇಳುತ್ತದೆ..  

7 /9

ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ಬಾಲಕೃಷ್ಣ ಜೊತೆಗೆ ಶ್ರುತಿ ಹಾಸನ್, ಬಾಬಿ ಡಿಯೋಲ್, ಪ್ರಜ್ಞಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ರಿಷಿ, ಚಾಂದನಿ ಚೌಧರಿ, ಊರ್ವಶಿ ರೌಟೇಲಾ ಮತ್ತು ಪ್ರದೀಪ್ ರಾವತ್ ನಟಿಸಿದ್ದಾರೆ. ಈ ಚಿತ್ರಕ್ಕೆ ಥಮನ್ ಸಂಗೀತ ನಿರ್ದೇಶನ, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಮತ್ತು ರೂಬೆನ್ ಸಂಕಲನ ಮಾಡಿದ್ದಾರೆ.  

8 /9

2025 ರ ಸಂಕ್ರಾಂತಿಯ ಸಂದರ್ಭದಲ್ಲಿ ಬಿಡುಗಡೆಯಾದ 'ಡಾಕು ಮಹಾರಾಜ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ.ಗಳನ್ನು ಗಳಿಸಿತು. ಪ್ರಪಂಚದಾದ್ಯಂತ ಸೇರಿ ಒಟ್ಟು 104 ಕೋಟಿಗೂ ಹೆಚ್ಚು ಸಂಗ್ರಹಿಸಿತು.  

9 /9

ಈ ಚಿತ್ರ ಈಗ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಆದರೆ ಊರ್ವಶಿ ರೌಟೇಲಾ ಅವರ ದೃಶ್ಯಗಳನ್ನು ಒಟಿಟಿ ಆವೃತ್ತಿಯಿಂದ ತೆಗೆದುಹಾಕಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂದೆನಾಗುತ್ತೆ ಅಂತ ಕಾಯ್ದು ನೋಡಬೇಕಿದೆ..