ಬೆಂಗಳೂರು : ಮೆಟ್ರೋ ದರ ಹೆಚ್ಚಳದ ವಿರುದ್ಧ ಆಕ್ರೋಶ , ಪ್ರತಿಭಟನೆಗಳು ಜೋರಾಗಿದೆ. ಪ್ರಯಾಣಿಕರು ಮೆಟ್ರೋ ರೈಡ್ ಗೆ ಗುಡ್ ಬೈ ಹೇಳೋ ಡಿಸಿಷನ್ ನಲ್ಲಿದ್ರೆ, ಮೆಟ್ರೋ ಪ್ರಯಾಣಿಕರ ವೇದಿಕೆ, ದರ ಹೆಚ್ವಳದ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ನಿನ್ನೆ ಎಬಿವಿಪಿ ಸಂಘಟನೆ ಪ್ರತಿಭಟಿಸಿದ್ರೆ, ಇವತ್ತು ಕನ್ನಡಪರ ಹೋರಾಟಗಾರರು ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ರು.
ಕಳೆದ 8 ವರ್ಷಗಳಿಂದ ದರ ಹೆಚ್ವಿಸಲ್ಲ ಅನ್ನೋ ನೆಪ ಮುಂದಿಟ್ಟುಕೊಂಡು ಬಿಎಂಆರ್ ಸಿಎಲ್ ಯಾರ್ರಾಬಿರ್ರಿ ದರ ಹೆಚ್ಚಿಸಿದೆ. ೪೬% ಅನ್ನೊ ಲೆಕ್ಕ ಕೊಟ್ಟು ೧೦೦% ಮೆಟ್ರೋ ದರ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಮಕಮಲ್ ಟೋಪಿ ಹಾಕಿರುವ ಆರೋಪ ಕೇಳಿ ಬಂದಿದೆ. ಮೊದಲೇ ಬೆಲೆ ಏರಿಕೆ ಬಿಸಿಯಿಂದ ಕಂಗೆಟ್ಟ ಜನಸಾಮಾನ್ಯರಿಗೆ ಮೆಟ್ರೊ ಟಿಕೆಟ್ ದರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಿದ್ದು, ಇಂದು ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.
ಇದನ್ನೂ ಓದಿ : ಸಾರ್ವಜನಿಕ ರಸ್ತೆ ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟ ಆಫೀಸರ್
ಮೆಟ್ರೋ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನೆ :
ಮೆಟ್ರೋ ದರ ಹೆಚ್ಚಳದ ವಿರುದ್ಧ ಇಂದು ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಸದಸ್ಯರು ಪ್ರತಿಭಟನೆ ನಡೆಸಿದ್ರು..ಶಾಂತಿನಗರದ ಬಿಎಂಆರ್ ಸಿಎಲ್ ಕೇಂದ್ರ ಕಚೇರಿ ಮುಂಭಾಗ ಧರಣಿ ನಡೆಸಿದ್ರು. ಪಿಎಂ, ಸಿಎಂ, ಡಿಸಿಎಂ ಭಾವಚಿತ್ರಗಳಿರುವ ಪೋಸ್ಟರ್ ಹಿಡಿದು ಆಕ್ರೋಶ ಹೊರಹಾಕಿದ್ರು. ದರ ಇಳಿಕೆ ಮಾಡದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ರು. ೨೮ ಸಂಸದರು, ಸಚಿವರ ಶವಯಾತ್ರೆ ನಡೆಸುವುದಾಗಿ ತಿಳಿಸಿದ್ರು..
ದರ ಪರಿಷ್ಕರಣೆ ಬಗ್ಗೆ ಸಮಿತಿ ಗಮನಕ್ಕೆ :
ಕನ್ನಡಪರ ಹೋರಾಟಗಾರರ ಪ್ರತಿಭಟನೆ ಕಾರಣ ಬಿಎಂಆರ್ ಸಿಎಲ್ ಕೇಂದ್ರದ ಸುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಒಂದು ಕೆಎಸ್ ಆರ್ಪಿ ತುಕಡಿ ನಿಯೋಜನೆ ಮಾಡಿದ ಪೊಲೀಸರು, ಹೆಚ್ಚಿನ ಭದ್ರತೆ ನೀಡಿದ್ದರು. ಕನ್ನಡಪರ ಹೋರಾಟಗಾರರ ಪ್ರತಿಭಟನೆ ಶುರುವಾಗುತ್ತಿದಂತೆ, ಸ್ಥಳಕ್ಕೆ ಆಗಮಿಸಿದ ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್, ಮನವಿ ಸ್ವೀಕರಿಸಿದ್ರು. ಮೆಟ್ರೋ ದರ ಪರಿಷ್ಕರಣೆ ಸಮಿತಿ ಗಮನಕ್ಕೆ ತರಲಾಗುವುದು ಎಂದರು.
ಇದನ್ನೂ ಓದಿ : ಬಿ.ಕೆ.ಅಲ್ತಾಫ್ ಖಾನ್‌ಗೆ ದುಬೈನಿಂದ ಬೆದರಿಕೆ ಕರೆ
ಮೆಟ್ರೋಗೆ ಸಂಕಷ್ಟ ತಂದಿಟ್ಟ ಪ್ರಯಾಣ ದರ ಹೈಕ್ :
ಮೆಟ್ರೋ ದರ ಹೆಚ್ಚಳದ ಎಫೆಕ್ಟ್ ಮೆಟ್ರೋ ಪಾಸ್ ಗಳಿಗೂ ತಟ್ಟಿತ್ತು. ಬೇಕಾಬಿಟ್ಟಿ ದರ ಹೆಚ್ಚಾದ ಕಾರಣ ಪ್ರಯಾಣಿಕರು ಮೆಟ್ರೋ ಪಾಸ್ ಖರೀದಿಗೆ ಹಿಂದೇಟು ಹಾಕಿದ್ದರು. ಫೆಬ್ರವರಿ ೯ ರಿಂದ ನಮ್ಮ ಮೆಟ್ರೋದಲ್ಲಿ ಪ್ರಯಾಣ ದರ ಪರಿಷ್ಕರಣೆ ಆದ ಬೆನ್ನಲ್ಲೇ ಒಂದು ಕಡೆ ಪ್ರಯಾಣಿಕರ ಸಂಖ್ಯೆ ಗಣನೀಯ ಇಳಿಕೆಯಾದ್ರೆ, ಮತ್ತೊಂದೆಡೆ ೧, ೩ ಹಾಗೂ ೫ ದಿನದ ಡೇ ಪಾಸ್ ಖರೀದಿಸುವ ಸಂಖ್ಯೆ ಬಾರಿ ಇಳಿಮುಖವಾಗಿತ್ತು. ಮೆಟ್ರೋ ದಿನದ ಪಾಸ್ ಈ ಮೊದಲು ಒಂದು ದಿನದ ಪಾಸ್ ಗೆ ೧೫೦ ರೂ, ೩ ದಿನಗಳ ಪಾಸ್ ಗೆ ೩೫೦ ರೂ ಹಾಗೂ ೫ ದಿನಗಳ ಡೈಲಿ ಪಾಸ್ ಗೆ ೫೫೦ ರೂ ನಿಗಧಿಯಾಗಿತ್ತು. ಆದರೆ ದರ ಹೆಚ್ಚಳದ ಬಳಿಕ ಒಂದು ದಿನದ ಪಾಸ್ ೧೫೦ ರಿಂದ ೩೦೦ ರೂ ಆದ್ರೆ, ಮೂರು ದಿನಗಳ ಪಾಸ್ ೩೫೦ ರಿಂದ ೬೦೦ ರೂ, ಐದು ದಿನಗಳ ಪಾಸ್ ೫೫೦ ರಿಂದ ೮೦೦ ರೂ ನಿಗಧಿಯಾಗಿದೆ.
ನಿತ್ಯ ಬೆಂಗಳೂರು ೨೫ ರಿಂದ ೩೦ ಮೆಟ್ರೋ ಪಾಸ್ ಖರೀದಿ ಆಗ್ತಿತ್ತು. ವೀಕ್ ಎಂಡ್ ನಲ್ಲಿ ಪಾಸ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಿತ್ತು. ಆದ್ರೆ ಕಳೆದ ಭಾನುವಾರ ಪಾಸ್ ಖರೀದಿ ಮಾಡುವವರ ಸಂಖ್ಯೆ ಡ್ರಾಪ್ ಆಗಿತ್ತು. ಒಟ್ನಲ್ಲಿ ದರ ಹೆಚ್ಚಳ ಮೆಟ್ರೋ ಆಡಳಿತಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.