Sai tamhankar: ನಮ್ಮ ಸುತ್ತಮುತ್ತಲಿನ ಪ್ರಪಂಚದಲ್ಲಿ ಯಾವಾಗ ಯಾರ ಮೇಲೆ ಹೇಗೆ ಪ್ರೀತಿ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.. ಇದೇ ರೀತಿಯ ಅನೇಕ ಪ್ರಸಿದ್ಧ ಪ್ರೇಮಕಥೆಗಳಿವೆ. ವಿಚ್ಛೇದನ ಪಡೆದ ತಕ್ಷಣ, ಅಂತಹ ಒಬ್ಬ ನಟಿ ತನ್ನ ಮಾಜಿ ಪತಿಯೊಂದಿಗೆಯೇ ಪಾರ್ಟಿ ಮಾಡಿದ್ದರು. ಆ ನಟಿ ಬೇರಾರೂ ಅಲ್ಲ.. ಸಾಯಿ ತಮ್ಹಂಕರ್..
ಇದನ್ನೂ ಓದಿ : 6, 4, 4, 6, 6...ಅಬುದಾಬಿಯಲ್ಲಿ ರನ್ ಗಳ ಸುರಿ ಮಳೆ !ನೈಟ್ ರೈಡರ್ಸ್ ಬೌಲರ್ ಬೆವರಿಳಿಸಿದ RCB ಆಟಗಾರ !
ನಟಿ ಸಾಯಿ ತಮ್ಹಂಕರ್ 2013 ರಲ್ಲಿ ನಿರ್ಮಾಪಕಿ ಅಮೇ ಗೋಸಾವಿ ಅವರನ್ನು ವಿವಾಹವಾದರು. ಆದರೆ 2 ವರ್ಷಗಳಲ್ಲಿ ವಿಚ್ಛೇದನ ಪಡೆದರು. ಇತ್ತೀಚಿಗೆ ಹಾಟರ್‌ಫ್ಲೈಗೆ ನೀಡಿದ ಸಂದರ್ಶನವೊಂದರಲ್ಲಿ, ಸಾಯಿ ತಮ್ಮ ಮದುವೆ ಮತ್ತು ವಿಚ್ಛೇದನದ ಬಗ್ಗೆ ಹಲವಾರು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ವಿಚ್ಛೇದನದ ನಂತರದ ತನ್ನ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ..
ಇದನ್ನೂ ಓದಿ : 6, 4, 4, 6, 6...ಅಬುದಾಬಿಯಲ್ಲಿ ರನ್ ಗಳ ಸುರಿ ಮಳೆ !ನೈಟ್ ರೈಡರ್ಸ್ ಬೌಲರ್ ಬೆವರಿಳಿಸಿದ RCB ಆಟಗಾರ !
ನ್ಯಾಯಾಲಯದಲ್ಲಿ ವಿಚ್ಛೇದನ ಅಂತಿಮಗೊಂಡ ನಂತರ, ತಾನು ಮತ್ತು ತನ್ನ ಮಾಜಿ ಪತಿ ಅಮೇಯಾ ತಮ್ಮ 8-10 ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾಗಿ ಸಾಯಿ ಸಂದರ್ಶನದಲ್ಲಿ ಹೇಳಿದರು. "ವಿಚ್ಛೇದನದ ನಂತರ, ನಾವಿಬ್ಬರೂ ಬೇಸರದಲ್ಲಿ ಇರುವುದರಿಂದ ವಿಶ್ರಾಂತಿ ಪಡೆಯಲು ಬಯಸಿ, ರಿಪ್ರೆಶ್‌ಮೆಂಟ್‌ಗಾಗಿ ಹೊರಗೆ ಹೋಗಲು ಇಚ್ಚಿಸಿ.. ಪಾರ್ಟಿ ಮಾಡಲು ಹೋದೆವು.. ನಂತರ ನಾವು ಅಲ್ಲಿ ಅಳುತ್ತಾ ಪ್ರೀತಿಯ ಬಗ್ಗೆ ಮಾತನಾಡಿದೆವು ಮತ್ತು ಜೀವನದ ಬಗ್ಗೆ ಕೆಲವು ಸಲಹೆಗಳನ್ನು ಹೇಳಿಕೊಂಡೆವು.. ಕೆಲವು ಆಪ್ತ ಸ್ನೇಹಿತರಿಗೆ ಇದರ ಬಗ್ಗೆ ತಿಳಿದಿತ್ತು, ಆದ್ದರಿಂದ ಅವರು ಕೂಡ ನಮ್ಮೊಂದಿಗೆ ಪಾರ್ಟಿಗೆ ಸೇರಿಕೊಂಡರು. ನಮ್ಮ ಸ್ನೇಹಿತರಿಗೆ ವಿಚ್ಛೇದನದ ಬಗ್ಗೆ ತಿಳಿದಿದ್ದರಿಂದ, "ನೀವು ಹೇಗಿದ್ದೀರಿ, ಎಲ್ಲವೂ ಸರಿಯಾಗಿದೆಯೇ?" ಎಂದು ಕೇಳುತ್ತಾ ನಮಗೆ ಒಂದರ ನಂತರ ಒಂದರಂತೆ ಕರೆಗಳು ಬರಲು ಪ್ರಾರಂಭಿಸಿದವು. ಅವರು ಕರೆ ಮಾಡಿದ ತಕ್ಷಣ, ನಾವು ಅವರಿಗೆ ನಮ್ಮ ಸ್ಥಳವನ್ನು ಹೇಳಿದೆವು ಮತ್ತು ನಂತರ 8-10 ಜನರು ಅಲ್ಲಿಗೆ ಬಂದರು. ನಂತರ ನಾವು ಒಟ್ಟಿಗೆ ಕುಡಿದು ಚೆನ್ನಾಗಿ ಸಮಯ ಕಳೆದೆವು" ಎಂದು ನಟಿ ಹೇಳಿಕೊಂಡಿದ್ದಾರೆ.. ವಿಚ್ಛೇದನದ ನಂತರವೂ ತನ್ನ ಮಾಜಿ ಪತಿ ಅಮೇಯಾ ಜೊತೆ ಉತ್ತಮ ಸಂಬಂಧ ಹೊಂದಿರುವುದಾಗಿ ಸಾಯಿ ಹೇಳಿದ್ದಾರೆ. ಇಬ್ಬರೂ ನಿರಂತರವಾಗಿ ಪರಸ್ಪರ ಭೇಟಿಯಾಗುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ